ಎ ಸೆಕಂಡ್ ಹ್ಯಾಂಡ್ ಲವರ್’ ಎರಡನೆ ಹಂತ

  • IndiaGlitz, [Saturday,January 04 2014]

ನಿರ್ದೇಶಕ ರಾಘವ್ ಮರಸುರು ಅವರು ತನ್ನ ಸ್ನೇಹಿತ ಮಂಜುನಾಥ್ ವಿ ಅವರ ನಿರ್ಮಾಣದಲ್ಲಿ ಪ್ರಾರಂಭ ಮಾಡಿರುವ ‘ಎ ಸೆಕಂಡ್ ಹ್ಯಾಂಡ್ ಲವರ್’ ಸಿನೆಮಾದ ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲೇ ಪ್ರಾರಂಭವಾಗಿದೆ. ಮೊದಲನೇ ಹಂತವು ಸಹ ಬೆಂಗಳೂರಿನಲ್ಲೇ ಮಾಡಿದ್ದರು ನಿರ್ದೇಶಕರು.ಅವರು ‘ರಾಘವ ಮರಸುರು ಸಿನೆಮಾಸ್’ ಎಂಬ ಬ್ಯಾನ್ನರ್ ಸಹ ಪ್ರಾರಂಭಿಸಿದ್ದಾರೆ.

ರಾಕ್ ಸ್ಟಾರ್ ಸುತ್ತ ಹೆಣೆಯಲಾದ ಕಥೆಗೆ ರಾಕ್ ಸಂಗೀತದಲ್ಲಿ ಪರಿಚಯ ಇರುವ ಪ್ರಸಿದ್ದ ಸಂಗೀತ ನಿರ್ದೇಶಕ ಗುರುಕಿರಣ್ ಅವರ ರಾಗ ಸಂಯೋಜನೆ ಇದೆ. ಕೆ ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ, ರವಿ ವರ್ಮ ಅವರ ಸಾಹಸ, ಕವಿರಾಜ್ ಅವರ ಸಾಹಿತ್ಯ, ಹೊಸಮನೆ ಮೂರ್ತಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕೆ ಇದೆ.

ಅಜೈ ರಾವ್ ಅವರಿಗೆ ನಾಯಕಿಯಾಗಿ ಅನಿಶ ಕನ್ನಡಕ್ಕೆ ಆಗಮಿಸಿದ್ದಾರೆ.